ವಿಶೇಷ ವರದಿ:ಬದಲಾಗುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಬಳಕೆ ವ್ಯಾಪಕವಾಗಿದೆ.
ಇದರ ಬೆನ್ನಲ್ಲೇ ಹದಿಹರೆಯದ ಮಕ್ಕಳಲ್ಲಿ ದೈಹಿಕ ಜಾಗೃತಿಯ ಕೊರತೆ, ಹಾದಿ ತಪ್ಪುವಿಕೆ ಹಾಗೂ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯಗಳು ದೇಶಾದ್ಯಂತ ಕಳವಳಕಾರಿಯಾಗಿ ಹೆಚ್ಚುತ್ತಿವೆ. ಇಂತಹ ಗಂಭೀರ ಪರಿಸ್ಥಿತಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಒಂದು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ.
ದೇಶದ ಎಲ್ಲಾ ಶಾಲೆ ಮತ್ತು ಕಾಲೇಜುಗಳಲ್ಲಿ ಹಂತ ಹಂತವಾಗಿ ‘ಸಮಗ್ರ ಲೈಂಗಿಕ ಶಿಕ್ಷಣ ಮತ್ತು ಮಕ್ಕಳ ಸುರಕ್ಷತಾ ಜಾಗೃತಿ’ (Comprehensive Sexuality Education) ಕಾರ್ಯಕ್ರಮವನ್ನು ಕಡ್ಡಾಯವಾಗಿ ಜಾರಿಗೆ ತರಲು ಕೇಂದ್ರ ಮುಖ ಮಾಡಿದ್ದು, ಈಗ ಸುಪ್ರೀಂ ಕೋರ್ಟ್ನ ಅಂತಿಮ ಹಸಿರು ನಿಶಾನೆಗಾಗಿ ಕಾಯುತ್ತಿದೆ.ಹಿನ್ನೆಲೆ: ಸುಪ್ರೀಂ ಕೋರ್ಟ್ ಕಳವಳ ಮತ್ತು ತಜ್ಞರ ಸಮಿತಿ ರಚನೆದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹದಿಹರೆಯದವರ ನಡುವಿನ ಪ್ರೇಮ ಪ್ರಕರಣಗಳು ಹಾಗೂ ಸಹಮತಿಯ ಲೈಂಗಿಕ ಸಂಬಂಧಗಳೂ ಸಹ ‘ಪೋಕ್ಸೋ’ (POCSO) ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆಗಳಾಗಿ ಬದಲಾಗುತ್ತಿರುವುದನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಗಮನಿಸಿತ್ತು.
ಕಾನೂನಿನ ಅರಿವಿಲ್ಲದೆ ಅಪ್ರಾಪ್ತರು ಜೀವನ ಹಾಳುಮಾಡಿಕೊಳ್ಳುತ್ತಿರುವುದನ್ನು ತಡೆಯಲು ಮತ್ತು ಮಕ್ಕಳಿಗೆ ದೈಹಿಕ ಸುರಕ್ಷತೆಯ ಪಾಠ ಹೇಳಿಕೊಡಲು ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶಿಸಿತ್ತು.
ಇದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರವು ಶಿಕ್ಷಣ ತಜ್ಞರು, ಮನಶ್ಶಾಸ್ತ್ರಜ್ಞರು, ವೈದ್ಯರು ಮತ್ತು ಕಾನೂನು ತಜ್ಞರನ್ನೊಳಗೊಂಡ 26 ಸದಸ್ಯರ ಉನ್ನತ ಮಟ್ಟದ ರಾಷ್ಟ್ರೀಯ ತಜ್ಞರ ಸಮಿತಿಯನ್ನು ರಚಿಸಿತ್ತು. ಪ್ರಸ್ತುತ, ಈ ಸಮಿತಿಯು ನೀಡಿರುವ ಎಲ್ಲಾ ಪ್ರಮುಖ ಶಿಫಾರಸುಗಳನ್ನು ತಾನು ಒಪ್ಪಿಕೊಂಡಿರುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹದೇವನ್ ಅವರಿದ್ದ ನ್ಯಾಯಪೀಠದ ಮುಂದೆ ಕೇಂದ್ರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ಈ ಮಹತ್ವದ ವರದಿಯನ್ನು ಮಂಡಿಸಿದ್ದಾರೆ
.ತಜ್ಞರ ಸಮಿತಿಯ ಪ್ರಮುಖ ಶಿಫಾರಸುಗಳು ಮತ್ತು ಜಾರಿಯ ರೂಪರೇಷೆರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಅಡಿಯಲ್ಲಿ ಈ ಹೊಸ ಪಠ್ಯಕ್ರಮವನ್ನು ಅಳವಡಿಸಲು ಸಮಿತಿ ಶಿಫಾರಸು ಮಾಡಿದ್ದು, ಅದರ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:ವಾರದಲ್ಲಿ ಎರಡು ಬಾರಿ ಕಡ್ಡಾಯ ತರಗತಿ: ಶಾಲೆಗಳಲ್ಲಿ ಕೇವಲ ಪಠ್ಯಪುಸ್ತಕದ ಪಾಠಗಳಷ್ಟೇ ಸಾಲದು. ವಾರದಲ್ಲಿ ಕನಿಷ್ಠ ಎರಡು ಬಾರಿ 15 ರಿಂದ 20 ನಿಮಿಷಗಳ ಕಾಲ ಮಕ್ಕಳ ಸುರಕ್ಷತೆ ಮತ್ತು ದೈಹಿಕ ಜಾಗೃತಿಯ ಬಗ್ಗೆ ಕಡ್ಡಾಯವಾಗಿ ವಿಶೇಷ ತರಗತಿಗಳನ್ನು ನಡೆಸಬೇಕು.
ವಿಶೇಷ ತರಬೇತಿ ಪಡೆದ ಶಿಕ್ಷಕರು: ಲೈಂಗಿಕ ಶಿಕ್ಷಣ ಎಂದರೆ ಮುಜುಗರ ಪಡುವ ವಿಷಯವಲ್ಲ ಎಂಬುದನ್ನು ಮೊದಲು ಶಿಕ್ಷಕರಿಗೆ ಮನವರಿಕೆ ಮಾಡಿಕೊಡಬೇಕು. ಇದಕ್ಕಾಗಿ ಶಾಲೆಗಳಲ್ಲಿ ಪ್ರತ್ಯೇಕ ಕೌನ್ಸಿಲರ್ಗಳು ಅಥವಾ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಬೇಕು.ಪೋಷಕರಿಗೂ ಜಾಗೃತಿ ಸಭೆಗಳು: ಮಕ್ಕಳು ಹದಿಹರೆಯಕ್ಕೆ ಕಾಲಿಡುವಾಗ ಅವರಲ್ಲಿ ಆಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಪೋಷಕರು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಪೋಷಕರಿಗೂ ನಿಯಮಿತವಾಗಿ ಕೌನ್ಸೆಲಿಂಗ್ ಕಾರ್ಯಾಗಾರಗಳನ್ನು ಆಯೋಜಿಸಬೇಕು.
ಏಕರೂಪದ ರಾಷ್ಟ್ರೀಯ ಪಠ್ಯಕ್ರಮ: ಇಡೀ ದೇಶದಾದ್ಯಂತ ಯಾವುದೇ ಗೊಂದಲವಿಲ್ಲದೆ ಜಾರಿಗೆ ತರಲು NCERT (National Council of Educational Research and Training) ಮೂಲಕ ವಯಸ್ಸಿಗೆ ತಕ್ಕಂತಹ ವೈಜ್ಞಾನಿಕ ಬೋಧನಾ ಸಾಮಗ್ರಿಗಳನ್ನು ಸಿದ್ಧಪಡಿಸುವುದು.ವಯಸ್ಸಿಗೆ ತಕ್ಕಂತೆ ಪಠ್ಯಕ್ರಮದ ವಿಂಗಡಣೆ (Age-Appropriate Curriculum)ಲೈಂಗಿಕ ಶಿಕ್ಷಣ ಎಂದರೆ ಕೇವಲ ದೈಹಿಕ ಸಂಬಂಧದ ಬಗೆಗಿನ ಜ್ಞಾನವಲ್ಲ. ಇದನ್ನು ಮಕ್ಕಳ ವಯಸ್ಸು ಮತ್ತು ಗ್ರಹಿಕಾ ಶಕ್ತಿಗೆ ಅನುಗುಣವಾಗಿ ಮೂರು ಹಂತಗಳಲ್ಲಿ ವಿಂಗಡಿಸಲು ಸಮಿತಿ ಸೂಚಿಸಿದೆ:
