:
09: ರಾಜ್ಯದ ಮುಖ್ಯಮಂತ್ರಿಗಳು ಅತ್ಯಂತ ಜನಪರ ಹಾಗೂ ದಕ್ಷ ಆಡಳಿತಗಾರರಾಗಿದ್ದರೂ, ಸದ್ಯ ಇಡೀ ರಾಜ್ಯ ಮತ್ತು ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗ ಭೀಕರ ಬರಗಾಲಕ್ಕೆ ತುತ್ತಾಗಲು ಮಂತ್ರಿಮಂಡಲ ರಚನೆಯ ಗಳಿಗೆ ಹಾಗೂ ಗದಗ ಜಿಲ್ಲೆಯ ಹೆಮ್ಮೆಯ ಹಾಗೂ ಅದೃಷ್ಟವಂತ ನಾಯಕ ಎಚ್.ಕೆ. ಪಾಟೀಲ್ ಅವರಿಗೆ ಸೂಕ್ತ ಸ್ಥಾನಮಾನ ಸಿಗದೇ ಇರುವುದೇ ನೇರ ಕಾರವಾಗಿದೆ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಅತ್ಯಂತ ಬಲವಾಗಿ ಪ್ರತಿಪಾದಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸನ್ಮಾನ್ಯ ಎಚ್.ಕೆ. ಪಾಟೀಲ್ ಅವರು ಕೇವಲ ರಾಜಕೀಯ ನಾಯಕರಲ್ಲ, ಅವರು ಅತ್ಯಂತ ಅದೃಷ್ಟವಂತ ಹಾಗೂ ಸತ್ಕಲ್ಗುಣ ಹೊಂದಿರುವ ಅಪರೂಪದ ಮುತ್ಸದ್ದಿ. ಈ ಹಿಂದೆ ಮಾನ್ಯ ಸಿದ್ದರಾಮಯ್ಯ ಸಾಹೇಬರ ಮಂತ್ರಿಮಂಡಲದಲ್ಲಿ ಅವರು ಹಿರಿಯ ಸಚಿವರಾಗಿದ್ದಾಗ ಉತ್ತರ ಕರ್ನಾಟಕ ಭಾಗಕ್ಕೆ ಮತ್ತು ನಾಡಿಗೆ ಮಳೆರಾಯನ ಕೃಪೆಯಲ್ಲಿ ಯಾವುದೇ ಕೊರತೆಯಾಗಿರಲಿಲ್ಲ. ಮತ್ತು ಅವರ ಆಡಳಿತಾವಧಿಯಲ್ಲಿ ಪ್ರಕೃತಿಯೂ ಕೃಪೆ ತೋರಿತ್ತು, ಭರಪೂರ ಮಳೆ-ಬೆಳೆಯಾಗಿ ಇಡೀ ನಾಡು ಸಮೃದ್ಧಿಯಿಂದ ಕಂಗೊಳಿಸುತ್ತಿತ್ತು ಎಂಬುದನ್ನು ನಾಡಿನ ಜನತೆ ಮರೆತಿಲ್ಲ” ಎಂದು ನೆನಪಿಸಿದ್ದಾರೆ.
ಆದರೆ ಪ್ರಸ್ತುತ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರು ಹಾಗೂ ಪಕ್ಷದ ವರಿಷ್ಠರು ಎಚ್.ಕೆ. ಪಾಟೀಲ್ ಅವರಂತಹ ಲಕ್ಕಿ ಮ್ಯಾನ್ ಹಾಗೂ ಜನಪ್ರಿಯ ನಾಯಕರಿಗೆ ಮಂತ್ರಿಮಂಡಲದಲ್ಲಿ ದೊಡ್ಡ ಹುದ್ದೆಯ ಸಚಿವ ಸ್ಥಾನ ನೀಡದೆ ಕಡೆಗಣಿಸಿರುವುದು ಇಡೀ ಉತ್ತರ ಕರ್ನಾಟಕ ಭಾಗಕ್ಕೆ ಎಸಗಿದ ಭಾರಿ ದ್ರೋಹವಾಗಿದೆ.
ಅವರ ಶುಭ ಹಸ್ತ ಹಾಗೂ ದಕ್ಷ ದೂರದೃಷ್ಟಿಯ ಕೊರತೆಯಿಂದಾಗಿಯೇ ಇಂದು ಇಡೀ ಭಾಗ ಮಳೆ ಇಲ್ಲದೆ ಕರಟಿ ಹೋಗಿದೆ, ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ಮತ್ತು ಮುಖ್ಯಮಂತ್ರಿಗಳು ಅಧಿಕೃತವಾಗಿ ಬರಗಾಲ ಘೋಷಿಸುವಂತಾಗಿದೆ” ಎಂದು ಕೃಷ್ಣಾ ಎಚ್ ಹಡಪದ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬರಗಾಲದ ಈ ಭೀಕರ ಪರಿಸ್ಥಿತಿ ತಕ್ಷಣವೇ ದೂರವಾಗಿ, ರಾಜ್ಯದಲ್ಲಿ ಮತ್ತೆ ಕರುಣಾಳು ಮಳೆರಾಯ ಕೃಪೆ ತೋರಬೇಕಾದರೆ ಹಾಗೂ ರೈತರ ಮತ್ತು ಸಾರ್ವಜನಿಕರ ಕಷ್ಟಗಳು ಕೊನೆಗೊಳ್ಳಬೇಕಾದರೆ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವವು ಯಾವುದೇ ವಿಳಂಬ ಮಾಡದೆ, ಅದೃಷ್ಟವಂತ ನಾಯಕರಾದ ಎಚ್.ಕೆ. ಪಾಟೀಲ್ ಸಾಹೇಬರಿಗೆ ಮಂತ್ರಿಮಂಡಲದಲ್ಲಿ ಅತ್ಯಂತ ಪ್ರಮುಖ ಹಾಗೂ ದೊಡ್ಡ ಹುದ್ದೆಯ ಸಚಿವ ಸ್ಥಾನವನ್ನು ನೀಡಿ ಗೌರವಿಸಬೇಕು”
ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಹಾಗೂ ಉತ್ತರ ಕರ್ನಾಟಕದ ಮಹಾ ಜನತೆಯ ಪರವಾಗಿ ಕೃಷ್ಣಾ ಎಚ್. ಹಡಪದ ಅವರು ಸರ್ಕಾರವನ್ನು ಅತ್ಯಂತ ಬಲವಾಗಿ ಆಗ್ರಹಿಸಿದ್ದಾರೆ.
ಕೃಷ್ಣಾ ಎಚ್ ಹಡಪದ
9845650612
