, ಜೂನ್ 22: ಗದಗ ಜಿಲ್ಲೆಯ ಶಿರಹಟ್ಟಿ ನಗರದ ಭಾವೈಕ್ಯತೆಯ ಸಂಕೇತವಾಗಿರುವ ಶ್ರೀ ಜಗದ್ಗುರು ಫಕೀರೇಶ್ವರ ಮಠ ಹಾಗೂ ಹಜರತ್ ಮೆಹಬೂಬ್ ಸುಭಾನಿ ದರ್ಗಾ ಮಧ್ಯದ ಪ್ರದೇಶದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸುಸಜ್ಜಿತ ಉಚಿತ ಸಾರ್ವಜನಿಕ ಶೌಚಾಲಯ ಮತ್ತು ಸ್ನಾನಗೃಹ ನಿರ್ಮಿಸಬೇಕೆಂದು ಆಗ್ರಹಿಸಿ
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಶಿರಹಟ್ಟಿ ತಾಲೂಕು ಘಟಕದ ವತಿಯಿಂದ ಸೋಮವಾರ ಮಾನ್ಯ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಶಿರಹಟ್ಟಿ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಬಳಿಕ ಉಪ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.ಮನವಿಯಲ್ಲಿ ಉಲ್ಲೇಖಿಸಿರುವಂತೆ, ಫಕೀರೇಶ್ವರ ಮಠ ಹಾಗೂ ಮೆಹಬೂಬ್ ಸುಭಾನಿ ದರ್ಗಾಗೆ ಪ್ರತಿನಿತ್ಯ ನೂರಾರು ಭಕ್ತರು ಭೇಟಿ ನೀಡುತ್ತಿದ್ದು,
ಜಾತ್ರೆ, ಉರುಸು ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಾವಿರಾರು ಜನರು ಆಗಮಿಸುತ್ತಾರೆ. ಆದರೆ ಈ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಸ್ನಾನಗೃಹದ ವ್ಯವಸ್ಥೆ ಇಲ್ಲದ ಕಾರಣ ಮಹಿಳೆಯರು, ವೃದ್ಧರು, ಮಕ್ಕಳು ಹಾಗೂ ದೂರದ ಊರುಗಳಿಂದ ಆಗಮಿಸುವ ಭಕ್ತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಮೂಲಸೌಕರ್ಯಗಳ ಕೊರತೆಯಿಂದಾಗಿ ಹಳ್ಳದ ಸುತ್ತಮುತ್ತ ಅಶುಚಿತ್ವ ಹೆಚ್ಚಾಗುತ್ತಿದ್ದು, ಪರಿಸರ ಮಾಲಿನ್ಯ ಹಾಗೂ ಸಾರ್ವಜನಿಕ ಆರೋಗ್ಯದ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ.
ಹೀಗಾಗಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಹಳ್ಳದ ದಂಡೆಯ ಮೇಲೆ ಉಚಿತ ಹಾಗೂ ಸುಸಜ್ಜಿತ ಸಾರ್ವಜನಿಕ ಶೌಚಾಲಯ ಸಂಕೀರ್ಣ ನಿರ್ಮಿಸಲು ಕೂಡಲೇ ಅಗತ್ಯ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು
.ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ತಾಲೂಕು ಕಾರ್ಯಾಧ್ಯಕ್ಷ ದೇವೇಂದ್ರ ಶಿಂದೆ, ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ವಡವಿ, ಶಿರಹಟ್ಟಿ ನಗರ ಘಟಕದ ಅಧ್ಯಕ್ಷ ಇಮ್ರಾನ್ ಸೇರಿದಂತೆ ಹಲವಾರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಾಹಿತಿ ಸಾಮ್ರಾಟ (Mahiti Samrata) ಎನ್ನುವುದು ಕರ್ನಾಟಕದ ಒಂದು ಪ್ರಮುಖ ಡಿಜಿಟಲ್ ಸುದ್ದಿ ಮತ್ತು ಮಾಹಿತಿ ಮಾಧ್ಯಮ ವೆಬ್ಸೈಟ್ ಆಗಿದೆ. ಭಾರತ ಸರ್ಕಾರದ ಆರ್ಎನ್ಐ (RNI - Registrar of Newspapers for India) ನಿಯಮಾವಳಿಗಳ ಅಡಿಯಲ್ಲಿ ನೋಂದಾಯಿತ ಪತ್ರಿಕಾ ಹಿನ್ನೆಲೆಯನ್ನು ಹೊಂದಿರುವ ಈ ಸಂಸ್ಥೆಯು ಸಾರ್ವಜನಿಕರಿಗೆ ನಿಖರ ಮತ್ತು ನೈಜ ಸುದ್ದಿಗಳನ್ನು ತಲುಪಿಸುವ ಧ್ಯೇಯವನ್ನು ಹೊಂದಿದೆ.
ನಿಮ್ಮ ವೆಬ್ಸೈಟ್ಗಾಗಿ ಅಥವಾ ಅದರ ಬಗ್ಗೆ ಮಾಹಿತಿ ಬೇಕಿದ್ದಲ್ಲಿ, ಈ ಕೆಳಗಿನ ಪ್ರಮುಖ ಅಂಶಗಳನ್ನು ಬಳಸಿಕೊಳ್ಳಬಹುದು:
1. ಮೂಲ ಧ್ಯೇಯ ಮತ್ತು ದೃಷ್ಟಿಕೋನ (Mission & Vision)
ಧ್ಯೇಯವಾಕ್ಯ: "ಮಾಹಿತಿಯೇ ಬಲ, ಸತ್ಯವೇ ಶಕ್ತಿ."
ಉದ್ದೇಶ: ಕರ್ನಾಟಕದ ಜನತೆಗೆ ಯಾವುದೇ ಪೂರ್ವಾಗ್ರಹವಿಲ್ಲದೆ ನಿಖರ, ನಿಷ್ಪಕ್ಷಪಾತ ಹಾಗೂ ವಿಶ್ವಾಸಾರ್ಹ ಸುದ್ದಿಗಳನ್ನು ತಲುಪಿಸುವುದು ಮತ್ತು ಜಾಗೃತ ಸಮಾಜ ನಿರ್ಮಾಣ ಮಾಡುವುದು.
2. ಪ್ರಮುಖ ವಿಭಾಗಗಳು (Main Categories)
ವೆಬ್ಸೈಟ್ನಲ್ಲಿ ಕೇವಲ ಬ್ರೇಕಿಂಗ್ ನ್ಯೂಸ್ ಮಾತ್ರವಲ್ಲದೆ, ಜನಸಾಮಾನ್ಯರಿಗೆ ಉಪಯುಕ್ತವಾಗುವ ಹಲವು ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ಲಭ್ಯವಿರುತ್ತದೆ:
ಅಧಿಕೃತ ಮಾಹಿತಿ & ಸರ್ಕಾರದ ಯೋಜನೆಗಳು: ಸಾರ್ವಜನಿಕರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳ ವಿವರಗಳು.
ಸ್ಥಳೀಯ ಮತ್ತು ರಾಜ್ಯ ಸುದ್ದಿ: ಕರ್ನಾಟಕದ ಮೂಲೆ ಮೂಲೆಗಳಿಂದ ನಡೆಯುವ ಪ್ರಮುಖ ಬೆಳವಣಿಗೆಗಳು ಮತ್ತು ರಾಜಕೀಯ ಅಪ್ಡೇಟ್ಸ್.
ಶಿಕ್ಷಣ ಮತ್ತು ಉದ್ಯೋಗ: ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಅಗತ್ಯವಿರುವ ಮಾಹಿತಿ (ಉದಾಹರಣೆಗೆ KCET ಅಪ್ಡೇಟ್ಸ್, ಉದ್ಯೋಗಾವಕಾಶಗಳು).
ಇತರ ವಿಭಾಗಗಳು: ಅಪರಾಧ ಜಗತ್ತು, ಸಿನಿಮಾ & ಮನರಂಜನೆ, ಕೃಷಿ, ತಂತ್ರಜ್ಞಾನ ಮತ್ತು ದಿನನಿತ್ಯದ ಪಂಚಾಂಗ.
3. ಪತ್ರಿಕೋದ್ಯಮದ ಮೌಲ್ಯಗಳು
ಈ ಮಾಧ್ಯಮವು ಕೇವಲ ಆಕರ್ಷಕ ಹೆಡ್ಲೈನ್ಗಳಿಗೆ (Clickbait) ಸೀಮಿತವಾಗದೆ ಸಾರ್ವಜನಿಕ ಹಿತಾಸಕ್ತಿ, ಸಾಮಾಜಿಕ ಸಮಸ್ಯೆಗಳು ಮತ್ತು ತನಿಖಾತ್ಮಕ ವರದಿಗಳಿಗೆ ಆದ್ಯತೆ ನೀಡುತ್ತದೆ.
ಡಿಜಿಟಲ್ ಯುಗದಲ್ಲಿ ಹರಡುವ ಸುಳ್ಳು ಸುದ್ದಿಗಳ ನಡುವೆ, ಸತ್ಯಾಧಾರಿತ ಮತ್ತು ಪಾರದರ್ಶಕ ವರದಿಗಾರಿಕೆಯನ್ನು ಕಾಯ್ದುಕೊಳ್ಳಲು ಬದ್ಧವಾಗಿದೆ.
Good