ಗದಗ, ಆಗಸ್ಟ್ 11: ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಿ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ಬಲಿಷ್ಠ ಗೆಲುವು ತಂದುಕೊಡಲು ಸಚಿನ್ ಡಿ. ಪಾಟೀಲ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಕೃಷ್ಣಾ ಎಚ್. ಹಡಪದ ಆಗ್ರಹಿಸಿದರು.
ಗದಗಕ್ಕೆ ಆಗಮಿಸಿದ್ದ ಎಐಸಿಸಿ ಕಾರ್ಯದರ್ಶಿ ಹಾಗೂ ಜಿಲ್ಲಾ ಮುಖ್ಯ ವೀಕ್ಷಕ ವಿವೇಕ್ ಬನ್ಸಾಲ್ ಅವರನ್ನು ಭೇಟಿಯಾದ ನಿಯೋಗವು ಸಚಿನ್ ಪಾಟೀಲ್ ಪರವಾಗಿ ಮನವಿ ಸಲ್ಲಿಸಿತು.
ಸಚಿನ್ ಪಾಟೀಲ್ ಅವರು ಶಿಕ್ಷಣ ಕ್ಷೇತ್ರದ ಮೂಲಕ ಬಡ, ದಲಿತ, ಹಿಂದುಳಿದ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವಾಗುವುದರ ಜೊತೆಗೆ, ಕಾಂಗ್ರೆಸ್ನ ಸಾಮಾನ್ಯ ಕಾರ್ಯಕರ್ತರೊಂದಿಗೆ ನಿರಂತರವಾಗಿ ನಿಂತು ಪಕ್ಷ ಸಂಘಟಿಸಿದ್ದಾರೆ.
ಗ್ರಾಮ ಪಂಚಾಯಿತಿಯಿಂದ ನಗರಸಭೆಯವರೆಗೆ ಅನೇಕ ಕಾರ್ಯಕರ್ತರಿಗೆ ರಾಜಕೀಯ ಅವಕಾಶ ಕಲ್ಪಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹಡಪದ ಹೇಳಿದರು.“ಗದಗ ಕಾಂಗ್ರೆಸ್ಗೆ ಇಂದು ಎಸಿ ರೂಂನಲ್ಲಿ ಕುಳಿತು ಭಾಷಣ ಮಾಡುವ ನಾಯಕನಿಗಿಂತ, ಕಾರ್ಯಕರ್ತರ ಪರವಾಗಿ ಬಿಸಿಲಿನಲ್ಲಿ ನಿಲ್ಲುವ ಹೋರಾಟಗಾರ ಬೇಕು
. ರಾಜ್ಯಕ್ಕೆ ಡಿ.ಕೆ. ಶಿವಕುಮಾರ್ ಅವರ ಸಂಘಟನಾ ಶಕ್ತಿ ಹೇಗೋ, ಗದಗಕ್ಕೆ ಸಚಿನ್ ಪಾಟೀಲ್ ಅವರ ಟ್ರಬಲ್ ಶೂಟರ್ ನಾಯಕತ್ವವೂ ಹಾಗೆಯೇ ಅಗತ್ಯ” ಎಂದು ಮಾಜಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರವಿಕುಮಾರ್ ರೆಡ್ಡಿ ಹೇಳಿದರು
.ಈ ಸಂದರ್ಭದಲ್ಲಿ ರವಿಕುಮಾರ್ ರೆಡ್ಡಿ, ಅರುಣ ರಾಂಪೂರ, ಚುಮ್ಮಿ ನದಾಫ್, ಅನಿಲಕುಮಾರ ಸಿದ್ದಮನಹಳ್ಳಿ, ಅಬ್ದುಲಮುನಾಫ ಮುಲ್ಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಾಹಿತಿ ಸಾಮ್ರಾಟ (Mahiti Samrata) ಎನ್ನುವುದು ಕರ್ನಾಟಕದ ಒಂದು ಪ್ರಮುಖ ಡಿಜಿಟಲ್ ಸುದ್ದಿ ಮತ್ತು ಮಾಹಿತಿ ಮಾಧ್ಯಮ ವೆಬ್ಸೈಟ್ ಆಗಿದೆ. ಭಾರತ ಸರ್ಕಾರದ ಆರ್ಎನ್ಐ (RNI - Registrar of Newspapers for India) ನಿಯಮಾವಳಿಗಳ ಅಡಿಯಲ್ಲಿ ನೋಂದಾಯಿತ ಪತ್ರಿಕಾ ಹಿನ್ನೆಲೆಯನ್ನು ಹೊಂದಿರುವ ಈ ಸಂಸ್ಥೆಯು ಸಾರ್ವಜನಿಕರಿಗೆ ನಿಖರ ಮತ್ತು ನೈಜ ಸುದ್ದಿಗಳನ್ನು ತಲುಪಿಸುವ ಧ್ಯೇಯವನ್ನು ಹೊಂದಿದೆ.
ನಿಮ್ಮ ವೆಬ್ಸೈಟ್ಗಾಗಿ ಅಥವಾ ಅದರ ಬಗ್ಗೆ ಮಾಹಿತಿ ಬೇಕಿದ್ದಲ್ಲಿ, ಈ ಕೆಳಗಿನ ಪ್ರಮುಖ ಅಂಶಗಳನ್ನು ಬಳಸಿಕೊಳ್ಳಬಹುದು:
1. ಮೂಲ ಧ್ಯೇಯ ಮತ್ತು ದೃಷ್ಟಿಕೋನ (Mission & Vision)
ಧ್ಯೇಯವಾಕ್ಯ: "ಮಾಹಿತಿಯೇ ಬಲ, ಸತ್ಯವೇ ಶಕ್ತಿ."
ಉದ್ದೇಶ: ಕರ್ನಾಟಕದ ಜನತೆಗೆ ಯಾವುದೇ ಪೂರ್ವಾಗ್ರಹವಿಲ್ಲದೆ ನಿಖರ, ನಿಷ್ಪಕ್ಷಪಾತ ಹಾಗೂ ವಿಶ್ವಾಸಾರ್ಹ ಸುದ್ದಿಗಳನ್ನು ತಲುಪಿಸುವುದು ಮತ್ತು ಜಾಗೃತ ಸಮಾಜ ನಿರ್ಮಾಣ ಮಾಡುವುದು.
2. ಪ್ರಮುಖ ವಿಭಾಗಗಳು (Main Categories)
ವೆಬ್ಸೈಟ್ನಲ್ಲಿ ಕೇವಲ ಬ್ರೇಕಿಂಗ್ ನ್ಯೂಸ್ ಮಾತ್ರವಲ್ಲದೆ, ಜನಸಾಮಾನ್ಯರಿಗೆ ಉಪಯುಕ್ತವಾಗುವ ಹಲವು ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ಲಭ್ಯವಿರುತ್ತದೆ:
ಅಧಿಕೃತ ಮಾಹಿತಿ & ಸರ್ಕಾರದ ಯೋಜನೆಗಳು: ಸಾರ್ವಜನಿಕರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳ ವಿವರಗಳು.
ಸ್ಥಳೀಯ ಮತ್ತು ರಾಜ್ಯ ಸುದ್ದಿ: ಕರ್ನಾಟಕದ ಮೂಲೆ ಮೂಲೆಗಳಿಂದ ನಡೆಯುವ ಪ್ರಮುಖ ಬೆಳವಣಿಗೆಗಳು ಮತ್ತು ರಾಜಕೀಯ ಅಪ್ಡೇಟ್ಸ್.
ಶಿಕ್ಷಣ ಮತ್ತು ಉದ್ಯೋಗ: ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಅಗತ್ಯವಿರುವ ಮಾಹಿತಿ (ಉದಾಹರಣೆಗೆ KCET ಅಪ್ಡೇಟ್ಸ್, ಉದ್ಯೋಗಾವಕಾಶಗಳು).
ಇತರ ವಿಭಾಗಗಳು: ಅಪರಾಧ ಜಗತ್ತು, ಸಿನಿಮಾ & ಮನರಂಜನೆ, ಕೃಷಿ, ತಂತ್ರಜ್ಞಾನ ಮತ್ತು ದಿನನಿತ್ಯದ ಪಂಚಾಂಗ.
3. ಪತ್ರಿಕೋದ್ಯಮದ ಮೌಲ್ಯಗಳು
ಈ ಮಾಧ್ಯಮವು ಕೇವಲ ಆಕರ್ಷಕ ಹೆಡ್ಲೈನ್ಗಳಿಗೆ (Clickbait) ಸೀಮಿತವಾಗದೆ ಸಾರ್ವಜನಿಕ ಹಿತಾಸಕ್ತಿ, ಸಾಮಾಜಿಕ ಸಮಸ್ಯೆಗಳು ಮತ್ತು ತನಿಖಾತ್ಮಕ ವರದಿಗಳಿಗೆ ಆದ್ಯತೆ ನೀಡುತ್ತದೆ.
ಡಿಜಿಟಲ್ ಯುಗದಲ್ಲಿ ಹರಡುವ ಸುಳ್ಳು ಸುದ್ದಿಗಳ ನಡುವೆ, ಸತ್ಯಾಧಾರಿತ ಮತ್ತು ಪಾರದರ್ಶಕ ವರದಿಗಾರಿಕೆಯನ್ನು ಕಾಯ್ದುಕೊಳ್ಳಲು ಬದ್ಧವಾಗಿದೆ.