ಶಾಸಕ ಎಚ್.ಕೆ. ಪಾಟೀಲ್ ಹಾಗೂ ಕೃಷ್ಣಗೌಡ್ರು ಪಾಟೀಲರಿಗೆ ಕೃತಜ್ಞತೆ: ಕೃಷ್ಣಾ ಹಡಪದ
ಗದಗ, ಸೆ. 07: ನಗರದ ಗಂಗಿಮಡಿ ಪ್ರದೇಶದಲ್ಲಿರುವ ಸವಿತಾ ಸಮಾಜ ಸುಧಾರಣಾ ಸಂಘದ ನಿವೇಶನದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ನಾಗದೇವರ ದೇವಸ್ಥಾನದ ಮೇಲ್ಛಾವಣಿ (ಸ್ಲ್ಯಾಬ್) ಹಾಕುವ ಧಾರ್ಮಿಕ ಕಾರ್ಯಕ್ರಮವು ಭಕ್ತಿಪೂರ್ವಕವಾಗಿ ಹಾಗೂ ಸಡಗರದಿಂದ ನೆರವೇರಿತು.
ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಹಿರಿಯ ಶಾಸಕರಾದ ಎಚ್.ಕೆ. ಪಾಟೀಲ್ ಅವರು ತಮ್ಮ ವಿಶೇಷ ಅನುದಾನದಡಿ ₹10 ಲಕ್ಷ ಅನುದಾನ ಮಂಜೂರು ಮಾಡಿಸಿಕೊಟ್ಟಿದ್ದು, ಇದರಿಂದ ದೇವಸ್ಥಾನದ ನಿರ್ಮಾಣ ಕಾರ್ಯವು ವ್ಯವಸ್ಥಿತವಾಗಿ ಮುಂದುವರಿದು ಇದೀಗ ಸ್ಲ್ಯಾಬ್ ಹಂತ ತಲುಪಿದೆ ಎಂದು ಸವಿತಾ ಸಮಾಜದ ಮುಖಂಡರು ತಿಳಿಸಿದ್ದಾರೆ
.ಸಾರ್ವಜನಿಕ ಸೇವೆಯಲ್ಲಿ ಸಕ್ರಿಯರಾಗಿರುವ ಹಿರಿಯ ಶಾಸಕ ಎಚ್.ಕೆ. ಪಾಟೀಲ್ ಅವರು ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ತಮ್ಮ ಅನುದಾನಗಳನ್ನು ಬಳಸುತ್ತಿರುವುದು ಶ್ಲಾಘನೀಯ ಎಂದು ಸವಿತಾ ಸಮಾಜದ ಮುಖಂಡರು ಅಭಿಪ್ರಾಯಪಟ್ಟರು.
ಶಾಸಕರ ಪುತ್ರ ಹಾಗೂ ಯುವ ಮುಖಂಡ ಕೃಷ್ಣಗೌಡ್ರು ಪಾಟೀಲ್ ಅವರು ಸವಿತಾ ಸಮಾಜದ ಮನವಿಗೆ ಸ್ಪಂದಿಸಿ, ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಅಗತ್ಯವಿದ್ದ ಅನುದಾನ ಮಂಜೂರಾಗುವಲ್ಲಿ ವಿಶೇಷ ಆಸಕ್ತಿ ವಹಿಸಿ ಸಹಕರಿಸಿದ್ದಾರೆ ಎಂದು ತಿಳಿಸಿದರು.ಗದಗ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಹಾಗೂ ಸಮಾಜದ ಹಿರಿಯ ನಾಯಕರಾದ ಹನುಮಂತಪ್ಪ ರಾಂಪೂರ ನೇತೃತ್ವದ ನಿಯೋಗವು ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ ಅನುದಾನ ಒದಗಿಸಲು ಸಹಕರಿಸಿದ ಶಾಸಕ ಎಚ್.ಕೆ. ಪಾಟೀಲ್ ಹಾಗೂ ಕೃಷ್ಣಗೌಡ್ರು ಪಾಟೀಲ್ ಅವರಿಗೆ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು
.ವಿಶೇಷ ಪೂಜೆ ಹಾಗೂ ಧನ್ಯತಾ ಭಾವದೇವಸ್ಥಾನದ ಸ್ಲ್ಯಾಬ್ ಕಾರ್ಯಕ್ರಮದ ಅಂಗವಾಗಿ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಉಪಾಧ್ಯಕ್ಷರು ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಅಮೃತ ಘಳಿಗೆಯಲ್ಲಿ ವಿಶೇಷ ಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು, “ನಮ್ಮ ಸವಿತಾ ಸಮಾಜದ ಸಾಮಾಜಿಕ ಹಾಗೂ ಧಾರ್ಮಿಕ ಬೆಳವಣಿಗೆಗೆ ಶಾಸಕ ಎಚ್.ಕೆ. ಪಾಟೀಲ್ ಸಾಹೇಬರು ಹಾಗೂ ಕೃಷ್ಣಗೌಡ್ರು ಪಾಟೀಲ್ ಅವರು ನೀಡುತ್ತಿರುವ ಪ್ರೋತ್ಸಾಹ ಮತ್ತು ಬೆಂಬಲ ಅಪಾರವಾಗಿದೆ.
ಅವರ ಕಳಕಳಿ ಹಾಗೂ ಆಶೀರ್ವಾದ ಸದಾಕಾಲ ನಮ್ಮ ಸಮಾಜದ ಮೇಲಿರಲಿ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೋಟೆಕಲ್ಲ, ಸಮಾಜದ ಜಿಲ್ಲಾ ನಾಯಕರಾದ ಹನುಮಂತಪ್ಪ ರಾಂಪೂರ, ಜಿಲ್ಲಾ ಖಜಾಂಚಿ ಅರೂಣ ರಾಂಪೂರ, ಸಮಾಜದ ಪ್ರಮುಖ ನಾಯಕರಾದ ಜಂಮ್ಮಣ್ಣ ಕಡಮೂರ, ಆಂಜನೇಯ ಆದೋನಿ, ಹೇಮಂತ ವಡ್ಡೆಪಲ್ಲೆ, ಯಲ್ಲಪ್ಪ ರಾಂಪೂರ, ರಾಮು ವಡ್ಡೆಪಲ್ಲೆ ಸೇರಿದಂತೆ ಸಮಾಜದ ಪದಾಧಿಕಾರಿಗಳು, ಗುರುಹಿರಿಯರು ಹಾಗೂ ಸಮಸ್ತ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು
.ಕೃಷ್ಣಾ ಎಚ್. ಹಡಪದ
ಗದಗ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರು
ಸಂಪರ್ಕ: 9845650612
