ಜುಲೈ ೨ ರಂದು ಅಂಧ ಕಲಾವಿದರಿಂದ ‘ಗಾನ ಸಿಂಚನ’ ಸಂಗೀತ ವೈಭವ
ಗದಗ 01: ನಗರದ ಗಂಗಾಪುರ ಪೇಟೆಯ ಆರಾಧ್ಯ ದೈವವಾದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಸಮಿತಿ-2026.ರ ವತಿಯಿಂದ ಹಮ್ಮಿಕೊಳ್ಳಲಾಗಿರುವ ಭವ್ಯ ಜಾತ್ರಾ ಮಹೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜೂನ್ ೨೮ ರಿಂದ ಜುಲೈ ೧೩ ರವರೆಗೆ ಅತ್ಯಂತ ಸಡಗರ-ಸಂಭ್ರಮಗಳಿಂದ ಜರುಗಲಿವೆ ಎಂದು ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಸಿದ್ದಪ್ಪ ಚ. ಪಲ್ಲೇದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ ೨೮ ರಿಂದ ಜುಲೈ ೦೧ ರವರೆಗೆ ದೇವಿಯ ಭವ್ಯ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ಯಶಸ್ವಿಯಾಗಿ ನೆರವೇರಿದ್ದು, ಜುಲೈ ೦೪ ರಂದು ವಿಶೇಷ ಕಳಸಾರೋಹಣ,
ಜುಲೈ ೦೭ ರಂದು ಭಕ್ತಾದಿಗಳಿಂದ ಉಡಿ ತುಂಬುವ ಸೇವೆ, ಜುಲೈ ೦೮ ರಂದು ಧಾರ್ಮಿಕ ಇತಿಹಾಸ ಪ್ರಸಿದ್ಧ ಭವ್ಯ ಮಹಾರಥೋತ್ಸವ (ತೇರು ಎಳೆಯುವಿಕೆ), ಜುಲೈ ೦೯ ರಂದು ಲಕ್ಷ್ಮ ದೀಪೋತ್ಸವ ಹಾಗೂ ಜುಲೈ ೧೦ ರಂದು ಸಾಮೂಹಿಕ ವಿವಾಹ ಮಹೋತ್ಸವ ಮತ್ತು ಮಹಾ ಅನ್ನಸಂತರ್ಪಣೆ ನೆರವೇರಲಿದೆ.*ಗುರುವಾರ ಸಾಂಸ್ಕೃತಿಕ ಸೌರಭ – ವಿಶೇಷ ಆಕರ್ಷಣೆ:*ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ ೦2-೦7-2026 ನೇ ಗುರುವಾರ ಸಂಜೆ 6:೦೦ ಗಂಟೆಗೆ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೊಸಳ್ಳಿಯ ಬೂದೀಶ್ವರ ಸಂಸ್ಥಾನ ಮಠದ ಪೂಜ್ಯ ಅಭಿನವ ಜಗದ್ಗುರು ಶ್ರೀ ಬೂದೀಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷರಾದ ಶ್ರೀ ಸಿದ್ದಪ್ಪ ಚ. ಪಲ್ಲೇದ ವಹಿಸಲಿದ್ದು, ಗದಗ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕರಾದ ಶ್ರೀ ಎಸ್. ಯು. ಸಜ್ಜನಶೆಟ್ಟರ ಅವರು ಮುಖ್ಯ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಶ್ರೀ ಎಸ್. ವಿ. ಸಂಕನೂರ, ನಗರಸಭೆಯ ಮಾಜಿ ಉಪಾಧ್ಯಕ್ಷರಾದ ಶ್ರೀ ಶಂಕರ ಪ್ರ. ಹಾನಗಲ್, ಗಣ್ಯ ಉದ್ಯಮಿಗಳಾದ ಶ್ರೀ ವಿಜಯಕುಮಾರ ಗಡ್ಡಿ, ನಗರಸಭೆ ಸದಸ್ಯರಾದ ಶ್ರೀ ಮಹಾಂತೇಶ ನಲವಡಿ ಹಾಗೂ ಎಸ್.ಎಸ್.ಕೆ. ಸಮಾಜದ ಅಧ್ಯಕ್ಷರಾದ ಶ್ರೀ ಫಕೀರಸಾ ಭಾಂಡಗೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ನಾಡಿನ ಹೆಸರಾಂತ ‘ಶ್ರೀ ಸಿದ್ದಾರೂಢ ಗಾನ ಸಿಂಚನ ಕಲಾ ತಂಡ’ದ ಅಂಧ ಕಲಾವಿದರಿಂದ ಭವ್ಯ ತತ್ವಪದಗಳು ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಮತ್ತು ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ ಎಂದು ಜಾತ್ರಾ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದ್ದಾರೆ
ವರದಿ
ಕೃಷ್ಣಾ ಎಚ್ ಹಡಪದ
9845650612
