ಗದಗ, ಅಕ್ಟೋಬರ್ 5: ಗದಗ-ಬೆಟಗೇರಿ ಅವಳಿ ನಗರದ ಸಾರ್ವಜನಿಕರ ಗಮನಕ್ಕೆ, ಅಕ್ಟೋಬರ್ 6, 2026ರಂದು ನಗರದ ವಿವಿಧ ವಾರ್ಡ್ಗಳು ಹಾಗೂ ಬಡಾವಣೆಗಳಿಗೆ ನೀರು ಪೂರೈಕೆ ಮಾಡಲಾಗುವುದು ಎಂದು ಗದಗ-ಬೆಟಗೇರಿ ನಗರಸಭೆ ತಿಳಿಸಿದೆ.
ನಗರಸಭೆಯ ಪ್ರಕಟಣೆಯ ಪ್ರಕಾರ, ವಾರ್ಡ್ ನಂ.1ರ ಸ್ಲಾಬ್ ಮನೆಗಳು, ವಾರ್ಡ್ ನಂ.2ರ ವೆಲ್ಫೇರ್ನ 1ನೇ ಕ್ರಾಸ್ನಿಂದ 6ನೇ ಕ್ರಾಸ್ವರೆಗೆ, ಎಡ-ಬಲ ಭಾಗಗಳು, ಕುಷ್ಟಗಿ ಚಾಳ ಹಾಗೂ ಮಾನ್ವಿ ಚಾಳ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ.ಅದೇ ರೀತಿ ವಾರ್ಡ್ ನಂ.6ರ ಮಂಜು ಸ್ಕೂಲ್ ಲೈನ್, ಮಳಲಿಯರ ಲೈನ್ ಹಾಗೂ ಪೂಜಾರಿ ಲೈನ್, ವಾರ್ಡ್ ನಂ.7ರ ಪಂಚಲಕ್ಷ್ಮೀ ಬಡಾವಣೆ, ಶಿವಾಜಿ ನಗರ 1ನೇ ಭಾಗ, ರಂಗಪ್ಪಜ್ಜನ ಮಠ ಹಾಗೂ 1ನೇ ಬ್ಯಾಚ್ ನರಸಾಪುರ ಇಂಡಸ್ಟ್ರಿಯಲ್ ಏರಿಯಾ ವ್ಯಾಪ್ತಿಗೂ ನೀರು ಪೂರೈಕೆ ನಡೆಯಲಿದೆ.
ವಾರ್ಡ್ ನಂ.22ರ ಗಂಗಿಮಡಿ ದೊಡ್ಡ ಮಸೂತಿ ಪ್ರದೇಶಗಳು, ವಾರ್ಡ್ ನಂ.5ರ ಕೆ.ಎಚ್.ಡಿ.ಸಿ. ನೇಕಾರ ಕಾಲೋನಿ, ವಾರ್ಡ್ ನಂ.29ರ ಪರಶುರ ಲೈನ್, ಬನ್ನಿಕಟ್ಟಿ ಲೈನ್ ಹಾಗೂ ನೆಲ್ಸನ್ ಮಂಡೇಲಾ ಸ್ಕೂಲ್ ಹತ್ತಿರದ ಪ್ರದೇಶ, ವಾರ್ಡ್ ನಂ.27ರ ಕಾಶಿ ವಿಶ್ವನಾಥ ನಗರ ಸೇರಿದಂತೆ ವಿವಿಧ ಪ್ರದೇಶಗಳು ನೀರು ಪೂರೈಕೆ ವ್ಯಾಪ್ತಿಯಲ್ಲಿ ಒಳಗೊಂಡಿವೆ.
ಇದರೊಂದಿಗೆ ವಾರ್ಡ್ ನಂ.30ರ ಎಸ್.ಪಿ. ಆಫೀಸ್, ಪುಟ್ಟರಾಜ ನಗರ, ಸಂಕಣ್ಣವರ ಲೇಔಟ್ ಹಾಗೂ ಕೇಶವ ನಗರ ಭಾಗ 1, 2 ಮತ್ತು 3, ವಾರ್ಡ್ ನಂ.30, 34 ಮತ್ತು 35ರ ವಡ್ಡರಗೇರಿ, ನೀಲಮ್ಮತಾಯಿ ಮಠ, 1ನೇ ಕ್ರಾಸ್, 3ನೇ ಕ್ರಾಸ್ ಹಾಗೂ ಇ.ಡಬ್ಲ್ಯೂ.ಎಸ್. ಪ್ರದೇಶಗಳಿಗೂ ನೀರು ಪೂರೈಕೆ ಮಾಡಲಾಗುವುದು.ವಾರ್ಡ್ ನಂ.31 ಮತ್ತು 32ರ ದಾಸರ ಓಣಿ ಹಾಗೂ ಚಿಕ್ಕಲಗಾರ ಓಣಿ ಪ್ರದೇಶಗಳಲ್ಲಿ 24/7 ನೀರು ಪೂರೈಕೆ ವ್ಯವಸ್ಥೆ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.
ವಾರ್ಡ್ ನಂ.26ರ ಹಳೆ ಬಸ್ಸ್ಟ್ಯಾಂಡ್ ಲೈನ್, ಬೇವಿನಕಟ್ಟಿ ಲೈನ್ ಭಾಗ 1 ಮತ್ತು 2, ಭೂಸ್ತರ ಲೈನ್, ಜನತಾ ಕಿರಾಣಿ ಲೈನ್, ಲಕ್ಷ್ಮೀ ಚಾಳ, ಸುಧಾ ಹೋಟೆಲ್ ಸಂಧಿ, ಸೋಡಾ ಅಂಗಡಿ ಲೈನ್ ಹಾಗೂ ಸಂಗಮ ಬಜಾರ್ ಪ್ರದೇಶಗಳಿಗೂ ನೀರು ಪೂರೈಕೆ ಮಾಡಲಾಗುತ್ತದೆ
.ಇನ್ನು ವಾರ್ಡ್ ನಂ.28ರ ಪಂಚಾಕ್ಷರಿ ನಗರ, 6ನೇ ಕ್ರಾಸ್ ಹಾಗೂ 4ನೇ ಕ್ರಾಸ್ ಪ್ರದೇಶಗಳಿಗೂ ನಿಗದಿತ ವೇಳಾಪಟ್ಟಿಯಂತೆ ನೀರು ಪೂರೈಕೆ ನಡೆಯಲಿದೆ.ತಾಂತ್ರಿಕ ಕಾರಣಗಳಿಂದ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಅಥವಾ ವಿಳಂಬ ಉಂಟಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
