ಗದಗ: ಅಮ್ಮ ಫೌಂಡೇಶನ್ (ರಿ), ಬೆಂಗಳೂರು ವತಿಯಿಂದ ಗದಗ ಜಿಲ್ಲಾ ನೌಕರರ ಭವನದಲ್ಲಿ ತಾಲೂಕು ಮಟ್ಟದ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಯಿತು
.ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಪ್ರತಿಯೊಂದು ತಾಲೂಕಿನಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಐದು ಅತ್ಯುತ್ತಮ ಸಾಧಕರನ್ನು ಆಯ್ಕೆ ಮಾಡಿ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಗೌರವಿಸಲಾಯಿತು
. ರೈತರು, ಮಾಜಿ ಸೈನಿಕರು, ಶಿಕ್ಷಕರು, ಮಹಿಳಾ ಸಾಧಕಿಯರು ಹಾಗೂ ಕಲಾವಿದರನ್ನು ಗುರುತಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಕೆಳಕಂಡ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು
:ಬಸವ ಕೃಷಿ ಋಷಿ ಪ್ರಶಸ್ತಿ – ಪ್ರಗತಿಪರ ರೈತರಿಗೆ (ಕೃಷಿ ರತ್ನ)ಬಸವನಾಡ ರಕ್ಷಕ ಪ್ರಶಸ್ತಿ – ದೇಶಸೇವೆ ಸಲ್ಲಿಸಿದ ಮಾಜಿ ಸೈನಿಕರಿಗೆಬಸವ ಬೆಳಕು ಪ್ರಶಸ್ತಿ – ನಿಸ್ವಾರ್ಥ ಸೇವೆ ಸಲ್ಲಿಸಿದ ಅತ್ಯುತ್ತಮ ಶಿಕ್ಷಕರಿಗೆಬಸವ ಭಾರತಿ ಪ್ರಶಸ್ತಿ – ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರಿಗೆಬಸವ ಕಲಾಶಿಖರ ಪ್ರಶಸ್ತಿ – ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರಿಗೆಇದರೊಂದಿಗೆ ಸುಮಾರು 300ಕ್ಕೂ ಹೆಚ್ಚು ಸಾಧಕರನ್ನು ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು
.ಪ್ರಗತಿಪರ ರೈತರ ವಿಭಾಗದಲ್ಲಿ ಲಕ್ಷ್ಮೇಶ್ವರ ತಾಲೂಕಿನ ಸಂಕದಾಳ ಗ್ರಾಮದ ರೈತರಾದ ದುರಗಪ್ಪ ಬಸಪ್ಪ ಹರಿಜನ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು, ಅವರ ಕೃಷಿ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಬಸವ ಕೃಷಿ ಋಷಿ (ಕೃಷಿ ರತ್ನ) ಪ್ರಶಸ್ತಿ ನೀಡಿ ಗೌರವಿಸಲಾಯಿತು
.ಅದೇ ಗ್ರಾಮದ ನೀಲನಗೌಡ ರಾಮನಗೌಡ ಪಾಟೀಲ, ಹಾಲಶಂಕ್ರಪ್ಪ ಮಲ್ಲಪ್ಪ ಸೂರಣಗಿ, ಪಕ್ಕೀರಯ್ಯ ಹಿರೇಮಠ ಹಾಗೂ ಹಾಲನಗೌಡ ಬಸನಗೌಡ ಪಾಟೀಲ ಅವರ ಕೃಷಿ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಬಸವ ಕೃಷಿ ಋಷಿ (ಕೃಷಿ ರತ್ನ) ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಪ್ರಶಸ್ತಿ ಸ್ವೀಕರಿಸಿದ ಸಾಧಕರಿಗೆ ಅಮ್ಮ ಫೌಂಡೇಶನ್ (ರಿ), ಬೆಂಗಳೂರು ಮಾರ್ಗದರ್ಶಕರಾದ ಬಸವರಾಜ ಬಳ್ಳಾರಿ, ಅಧ್ಯಕ್ಷ ಮೈಲಾರಪ್ಪ ಡಿ. ಎಚ್. (ವಕೀಲರು), ಖಜಾಂಚಿ ಮಾರುತಿ ಜಿ. ಎಚ್., ಕಾರ್ಯದರ್ಶಿ ವಿಶ್ವನಾಥ ದಲಾಲಿ ಹಾಗೂ ಸಂಸ್ಥೆಯ ಸರ್ವ ಸದಸ್ಯರು ಶುಭ ಹಾರೈಸಿದರು
.ವರದಿ: ಅಣ್ಣಪ್ಪ ಗುತ್ತೆಮ್ಮನವರ
