ಗದಗ 09: ಬದಲಾಗುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಮನುಷ್ಯನಿಗೆ ಆರೋಗ್ಯವೇ ನಿಜವಾದ ಭಾಗ್ಯ. ಪ್ರತಿಯೊಬ್ಬರೂ ದಿನನಿತ್ಯದ ವ್ಯಾಯಾಮ, ಉತ್ತಮ ಆಹಾರ ಪದ್ಧತಿ ಹಾಗೂ ಶಿಸ್ತುಬದ್ಧ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು” ಎಂದು ಖ್ಯಾತ ದಂತ ವೈದ್ಯರಾದ ಡಾ|| ನೇಹಾ ಹಿರೇಗೌಡರ ಅವರು ಕರೆ ನೀಡಿದರು.
ನಗರದ ಐತಿಹಾಸಿಕ ಹಾಳಕೇರಿ ಅನ್ನದಾನೇಶ್ವರ ಮಠದಲ್ಲಿ ಅಖಿಲ ಕರ್ನಾಟಕ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಹಿಳಾ ವಿವಿಧೋದ್ದೇಶಗಳ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಅಂತರರಾಷ್ಟ್ರೀಯ ವೈದ್ಯರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿ ಅನಾರೋಗ್ಯದ ವಿರುದ್ಧ ಹೋರಾಡಿ, ರೋಗಿಗಳನ್ನು ಗುಣಪಡಿಸಿ ಅವರಿಗೆ ಮರುಜೀವ ನೀಡುವುದು ವೈದ್ಯರ ಪರಮ ಕರ್ತವ್ಯ. ಇಂತಹ ಪವಿತ್ರ ವೃತ್ತಿ ನನಗೆ ಸಿಕ್ಕಿರುವುದು ನನ್ನ ಸೌಭಾಗ್ಯ. ವಿಶೇಷವಾಗಿ ಕೊರೊನಾ ಸಾಂಕ್ರಾಮಿಕತೆಯ ಭೀಕರ ದಿನಗಳಲ್ಲಿ ತಮ್ಮ ಪ್ರಾಣದ ಹಂಗು ತೊರೆದು, ಸೋಂಕಿನ ಭಯವಿಲ್ಲದೆ ದಿನದ 24 ಗಂಟೆಯೂ ರೋಗಿಗಳ ಜೀವ ಉಳಿಸಲು ಹೋರಾಡಿದ ವೈದ್ಯರ ಸೇವೆ ಸದಾ ಸ್ಮರಣೀಯ. ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ವೈದ್ಯರ ಕೊಡುಗೆ ಅತ್ಯಂತ ಪ್ರಮುಖವಾಗಿದೆ ಎಂದು ಡಾ. ನೇಹಾ ಶ್ಲಾಘಿಸಿದರು.*ಜುಲೈ 17 ರಂದು ಬೃಹತ್ ಆರೋಗ್ಯ ಶಿಬಿರ:*ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಮತ್ತೊಬ್ಬ ಪ್ರಮುಖ ಅತಿಥಿ, ಉಪನ್ಯಾಸಕರಾದ ವೀಣಾ ತೀರ್ಲಾಪುರ ಅವರು ಮಾತನಾಡಿ,
ಗದಗ ನಗರದ ಕೆ.ಎಲ್.ಇ (K.L.E) ಕಾಲೇಜಿನಲ್ಲಿ ಮುಂಬರುವ ಜುಲೈ 17 ರಂದು ಸಾರ್ವಜನಿಕರಿಗಾಗಿ ಆಯೋಜಿಸಲಾಗಿರುವ ‘ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ’ದ ಕುರಿತು ಸಭೆಯಲ್ಲಿದ್ದ ಎಲ್ಲರಿಗೂ ಸವಿಸ್ತಾರವಾದ ಮಾಹಿತಿ ನೀಡಿ, ಇದರ ಸದುಪಯೋಗ ಪಡಿಸಿಕೊಳ್ಳಲು ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ನ ಅಧ್ಯಕ್ಷರಾದ ಶ್ರೀಮತಿ ಪ್ರೇಮಾ ಮೇಟಿ ಅವರು ವಹಿಸಿ, ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ವೇದಿಕೆಯಲ್ಲಿ ಟ್ರಸ್ಟ್ನ ಖಜಾಂಚಿ ಶ್ರೀಮತಿ ಸರೋಜಾ ಫೈಲ್ ಹಾಗೂ ಸುಮಂಗಲಾ ರೆಡ್ಡೇರ ಉಪಸ್ಥಿತರಿದ್ದರ
. ಶ್ರೀಮತಿ ಶಶಿಕಲಾ ಲಕ್ಕನಗೌಡರ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ಸರೋಜಾ ಫೈಲ್ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಮಧು ಪಾಟೀಲ್ ಅವರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ಯೋಗೇಶ್ವರಿ ಭಾವಿಕಟ್ಟಿ ಅವರು ಕೊನೆಯಲ್ಲಿ ವಂದನಾರ್ಪಣೆ ಮಾಡಿದರು
.ಕಾರ್ಯಕ್ರಮದಲ್ಲಿ ಟ್ರಸ್ಟ್ನ ಪ್ರಮುಖ ಸದಸ್ಯರಾದ ಬಸಮ್ಮ ಭಾವಿಕಟ್ಟಿ, ಸರೋಜಾ ಚೇಗರೆಡ್ಡಿ, ಅಕ್ಕಮ್ಮ ರೆಡ್ಡೇರ, ಕವಿತಾ ಕಣ್ಣೂರ, ಶಿವಲೀಲಾ ಭಾವಿಕಟ್ಟಿ, ಮಂಜುಳಾ ದೊಡ್ಡಮನಿ, ಶಾರದಾ ಗೋವಣ್ಣವರ, ಶಾಂತಾ ದೊಡ್ಡಮನಿ, ಗಿರಿಜಾ ಸುಲೇಬಾನ, ಲಕ್ಷ್ಮಿ ಚೇಗರೆಡ್ಡಿ, ಜಯಶ್ರೀ ಗೌಡರ ಸೇರಿದಂತೆ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ- ಕೃಷ್ಣ ಎಚ್ ಹಡಪದ 9845650612
