ಗದಗ, ಆಗಸ್ಟ್ 14: ದೇಶವು 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿರುವ ಸಂದರ್ಭದಲ್ಲಿ, ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.16ರ ಹೊಂಬಳ ನಾಕಾ ಜನತಾ ಕಾಲೋನಿಯ ನಿವಾಸಿಗಳು ಮಾತ್ರ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾಲೋನಿ ನಿವಾಸಿಗಳು, ತಮ್ಮ ನೋವು-ನಲಿವುಗಳನ್ನು ಖುದ್ದಾಗಿ ಅರಿಯಲು ಶಾಸಕ ಹಾಗೂ ಸಚಿವ ಎಚ್.ಕೆ. ಪಾಟೀಲ್ ಅವರು ಅಧಿಕಾರಿಗಳೊಂದಿಗೆ ಕಾಲೋನಿಗೆ ಭೇಟಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿಪರ ಸೇವಾ ಸಂಘದ ಅಧ್ಯಕ್ಷ ಕೃಷ್ಣಾ ಎಚ್. ಹಡಪದ ಹಾಗೂ ಪದಾಧಿಕಾರಿಗಳು, “ಶಾಸಕರು ಕೇವಲ ಎರಡು ಗಂಟೆಗಳ ಕಾಲ ಕಾಲೋನಿಗೆ ಭೇಟಿ ನೀಡಿ ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಕಣ್ಣಾರೆ ನೋಡಿದರೆ, ನಮ್ಮ ಸಮಸ್ಯೆಗಳ ತೀವ್ರತೆ ಅವರಿಗೆ ಮನವರಿಕೆಯಾಗಲಿದೆ” ಎಂದು ಆಗ್ರಹಿಸಿದ್ದಾರೆ.
ಆಂಬುಲೆನ್ಸ್ಗೂ ದಾರಿ ಇಲ್ಲದ ರಸ್ತೆ ಸಮಸ್ಯೆಕಾಲೋನಿಯ ಹಲವು ರಸ್ತೆಗಳು ಪರಸ್ಪರ ಸಮರ್ಪಕವಾಗಿ ಸಂಪರ್ಕ ಹೊಂದಿಲ್ಲ ಎಂಬುದು ನಿವಾಸಿಗಳ ಪ್ರಮುಖ ಆರೋಪವಾಗಿದೆ. ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸೇರಿದಂತೆ ವಾಹನಗಳು ಒಳಗೆ ಬರಲು ಕಷ್ಟವಾಗುತ್ತಿದ್ದು, ರೋಗಿಗಳು ಹಾಗೂ ಗರ್ಭಿಣಿಯರನ್ನು ಮುಖ್ಯ ರಸ್ತೆಯವರೆಗೆ ಕರೆದೊಯ್ಯಬೇಕಾದ ಪರಿಸ್ಥಿತಿ ಇದೆ ಎಂದು ನಿವಾಸಿಗಳು ತಿಳಿಸಿದ್ದಾರೆ.
ಒಳಚರಂಡಿ ವ್ಯವಸ್ಥೆಯ ಕೊರತೆಕಾಲೋನಿಯಲ್ಲಿ ಯುಜಿಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಮನೆಯ ಬಳಕೆಯ ಕೊಳಚೆ ನೀರು ರಸ್ತೆಗಳಲ್ಲೇ ಹರಿಯುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ. ಇದರಿಂದ ದುರ್ವಾಸನೆ ಹಾಗೂ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದ್ದು, ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ
.ತಡೆಗೋಡೆಯಿಲ್ಲದ ರಾಜಕಾಲುವೆಯಿಂದ ಆತಂಕಕಾಲೋನಿ ಸಮೀಪದ ರಾಜಕಾಲುವೆಗೆ ಸಮರ್ಪಕ ತಡೆಗೋಡೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ಕೊಳಚೆ ನೀರು ವಸತಿ ಪ್ರದೇಶಕ್ಕೆ ನುಗ್ಗುತ್ತದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಇದರಿಂದ ಮನೆಗಳು ಹಾಗೂ ದವಸ-ಧಾನ್ಯಗಳಿಗೆ ಹಾನಿಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಕೆಲವು ಮನೆಗಳು ಕುಸಿದು ಬಿದ್ದಿರುವುದಾಗಿ ಅವರು ತಿಳಿಸಿದ್ದಾರೆ. ರಾಜಕಾಲುವೆ ಸುತ್ತಮುತ್ತ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.ಶಾಸಕರ ಮೇಲೆ ನಿವಾಸಿಗಳ ವಿಶ್ವಾಸ“ನಮ್ಮ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಮತ್ತು ಇಚ್ಛಾಶಕ್ತಿ ಶಾಸಕ ಎಚ್.ಕೆ. ಪಾಟೀಲ್ ಅವರಲ್ಲಿದೆ ಎಂಬ ವಿಶ್ವಾಸ ನಮಗಿದೆ
. 40 ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ, ಜನತಾ ಕಾಲೋನಿಯ ನಿವಾಸಿಗಳಿಗೂ ಸುರಕ್ಷಿತ ಹಾಗೂ ಗೌರವಯುತ ಜೀವನದ ಅವಕಾಶ ಕಲ್ಪಿಸಬೇಕು” ಎಂದು ಕೃಷ್ಣಾ ಎಚ್. ಹಡಪದ ಹಾಗೂ ಕಾಲೋನಿ ನಿವಾಸಿಗಳು ಮನವಿ ಮಾಡಿದ್ದಾರೆ.80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮೂಲಭೂತ ಸೌಕರ್ಯಗಳಿಗಾಗಿ ಹೋರಾಡುತ್ತಿರುವ ಜನತಾ ಕಾಲೋನಿ ನಿವಾಸಿಗಳ ಸಮಸ್ಯೆಗಳತ್ತ ಆಡಳಿತ ಹಾಗೂ ಜನಪ್ರತಿನಿಧಿಗಳು ತಕ್ಷಣ ಗಮನ ಹರಿಸಬೇಕೆಂಬ ಆಗ್ರಹ ಕೇಳಿಬಂದಿದೆ
.ಕೃಷ್ಣಾ ಎಚ್. ಹಡಪದ .: 9845650612
