ಅಲೆಯೂರು, ಕೆಮ್ತೂರು, ದುಗ್ಗಿಪದವು ಗ್ರಾಮಗಳಲ್ಲಿ ದಿಢೀರ್ ರೇಡ್; ₹8.71 ಲಕ್ಷ ಮೌಲ್ಯದ ರಾಸಾಯನಿಕ ಬಳಸಿ ಹಣ್ಣು ಮಾಡಿದ್ದ ಬಾಳೆಹಣ್ಣು ಜಪ್ತಿ–ನಾಶ
ಉಡುಪಿ | ಆಗಸ್ಟ್ 20, 2026: ರಾಸಾಯನಿಕ ಬಳಸಿ ಬಾಳೆಕಾಯಿಗಳನ್ನು ಕೃತಕವಾಗಿ ಹಣ್ಣು ಮಾಡಲಾಗುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ, ಕೇವಲ 12 ಗಂಟೆಗಳೊಳಗೆಯೇ ಆಹಾರ ಸುರಕ್ಷತೆ ಹಾಗೂ ಔಷಧಿ ಆಡಳಿತ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಉಡುಪಿ ತಾಲೂಕಿನ ಅಲೆಯೂರು, ಕೆಮ್ತೂರು ಹಾಗೂ ದುಗ್ಗಿಪದವು ಗ್ರಾಮಗಳಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ.
ಉಪವಿಭಾಗಾಧಿಕಾರಿ ರಶ್ಮಿ ಅವರ ಅಧ್ಯಕ್ಷತೆಯಲ್ಲಿ, ತಹಸೀಲ್ದಾರ್ ಗುರುರಾಜ್ ಅವರ ಸಹಕಾರದೊಂದಿಗೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿ ವಿವೇಕ್ ತ್ರಿಮಲ್ಲೆ ಅವರ ನೇತೃತ್ವದಲ್ಲಿ, ಕಂದಾಯ ಇಲಾಖೆಯ ಸಿಬ್ಬಂದಿಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ.
ಕಾರ್ಯಾಚರಣೆಯಲ್ಲಿ ರಾಸಾಯನಿಕ ಬಳಸಿ ಕೃತಕವಾಗಿ ಹಣ್ಣು ಮಾಡಲಾಗಿದೆ ಎಂದು ಗುರುತಿಸಲಾದ ಒಟ್ಟು 10,890 ಕೆ.ಜಿ. ಬಾಳೆಹಣ್ಣುಗಳನ್ನು ಜಪ್ತಿ ಮಾಡಿ ಡಂಪಿಂಗ್ ಸ್ಥಳದಲ್ಲಿ ನಿಯಮಾನುಸಾರ ನಾಶಪಡಿಸಲಾಗಿದೆ. ನಾಶಪಡಿಸಲಾದ ಬಾಳೆಹಣ್ಣುಗಳ ಅಂದಾಜು ಮೌಲ್ಯ ₹8,71,200 ಎಂದು ತಿಳಿಸಲಾಗಿದೆ
.ಕಠಿಣ ಕಾನೂನು ಕ್ರಮಕ್ಕೆ ಅವಕಾಶಪ್ರಕರಣದಲ್ಲಿ FCS Act ಸೆಕ್ಷನ್ 56, 58 ಹಾಗೂ 63 ಸೇರಿದಂತೆ ಅನ್ವಯಿಸುವ ಕಾನೂನು provisions ಅಡಿ ಕ್ರಮ ಕೈಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಸಂಬಂಧಿತ provisions ಅಡಿ ದಂಡ ವಿಧಿಸುವ ಅವಕಾಶವಿದ್ದು, ಅಂತಿಮ ದಂಡದ ಪ್ರಮಾಣವು ಪ್ರಕರಣದ ವಿಚಾರಣೆ ಹಾಗೂ ಸಂಬಂಧಪಟ್ಟ ಪ್ರಾಧಿಕಾರದ ನಿರ್ಧಾರದ ನಂತರ ನಿಗದಿಯಾಗಲಿದೆ
.ಇದರ ಜೊತೆಗೆ ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ BNS ಸೆಕ್ಷನ್ 274 ಹಾಗೂ ಅನ್ವಯಿಸುವ ಪೊಲೀಸ್ ಆಕ್ಟ್ provisions ಅಡಿಯಲ್ಲಿಯೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
12 ಗಂಟೆ — ಮಾಹಿತಿ ಇಂದ ಜಪ್ತಿ ಮತ್ತು ನಾಶದವರೆಗೆ
ಈ ಕಾರ್ಯಾಚರಣೆಯ ಪ್ರಮುಖ ಅಂಶವೆಂದರೆ ಮಾಹಿತಿ ಲಭ್ಯವಾದ ಕೇವಲ 12 ಗಂಟೆಗಳೊಳಗೆಯೇ ಅಧಿಕಾರಿಗಳು ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿ, ರಾಸಾಯನಿಕ ಬಳಕೆಯಾಗಿದೆ ಎಂದು ಗುರುತಿಸಲಾದ ಬಾಳೆಹಣ್ಣುಗಳನ್ನು ಜಪ್ತಿ ಮಾಡಿ, ಬಳಿಕ ನಾಶಪಡಿಸುವ ಪ್ರಕ್ರಿಯೆ ಪೂರ್ಣಗೊಳಿಸಿರುವುದು.
ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ದೂರುಗಳ ಮೇಲೆ ಇಲಾಖೆಗಳು ಇಷ್ಟು ತ್ವರಿತವಾಗಿ ಸ್ಪಂದಿಸಿರುವುದು ಗಮನಾರ್ಹವಾಗಿದ್ದು, ಇದೇ ರೀತಿಯ ನಿರಂತರ ತಪಾಸಣೆ ಮತ್ತು ಕಠಿಣ ಕ್ರಮಗಳು ಮುಂದುವರಿಯಬೇಕೆಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.
ರಾಸಾಯನಿಕದ ಮೂಲದ ತನಿಖೆ ಅಗತ್ಯಜಪ್ತಿ ಮಾಡಿದ ಬಾಳೆಹಣ್ಣುಗಳನ್ನು ನಾಶಪಡಿಸಿರುವುದರ ಜೊತೆಗೆ, ಅವುಗಳನ್ನು ಕೃತಕವಾಗಿ ಹಣ್ಣು ಮಾಡಲು ಬಳಸಲಾಗಿದೆ ಎನ್ನಲಾದ ರಾಸಾಯನಿಕದ ಮೂಲ, ಸರಬರಾಜುದಾರರು, ಬಳಕೆಯ ವಿಧಾನ ಹಾಗೂ ಇತರೆ ವ್ಯಾಪಾರಸ್ಥರಿಗೆ ಪೂರೈಕೆಯಾಗುತ್ತಿದೆಯೇ ಎಂಬುದರ ಕುರಿತು ತನಿಖೆ ನಡೆಸುವುದು ಕೂಡ ಅಗತ್ಯವಾಗಿದೆ.
ಸಾರ್ವಜನಿಕರ ಆರೋಗ್ಯದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೆ, ಆಹಾರ ಸುರಕ್ಷತಾ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
