ಗದಗ, ಜುಲೈ 28: ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ದಾರಿದೀಪ ಮಹಿಳಾ ವಿವಿಧೋದ್ದೇಶ ಸಂಸ್ಥೆಯ ವತಿಯಿಂದ ನಗರದ ರಾಜೀವ್ ಗಾಂಧಿನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾಜಿ ಸೈನಿಕರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಾರಿದೀಪ ಮಹಿಳಾ ವಿವಿಧೋದ್ದೇಶ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶಕುಂತಲಾ ಮುಳಗುಂದ, ದೇಶದ ಗಡಿಯನ್ನು ಕಾಪಾಡುವ ಸೈನಿಕರು ಭಾರತದ ಸ್ವಾತಂತ್ರ್ಯ, ಭದ್ರತೆ ಮತ್ತು ಗೌರವದ ನಿಜವಾದ ರಕ್ಷಕರು. ಅವರ ತ್ಯಾಗ, ಶಿಸ್ತು ಮತ್ತು ದೇಶಭಕ್ತಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಸ್ಫೂರ್ತಿಯಾಗಬೇಕು ಎಂದು ಕರೆ ನೀಡಿದರು
.ಈ ಸಂದರ್ಭದಲ್ಲಿ ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗೂಳಯ್ಯ ಮಾಲ್ಗಿತ್ತಿ ಮಠ, ಉಪಾಧ್ಯಕ್ಷ ಎಸ್. ಆರ್. ಪಾಟೀಲ್, ಕಾರ್ಯದರ್ಶಿ ಸಿ. ಜಿ. ಸೊನ್ನದ್ ಹಾಗೂ ನಿರ್ದೇಶಕ ಸಿದ್ದಪ್ಪ ಹೂಗಾರ ಅವರನ್ನು ಶಾಲೆ ಹಾಗೂ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಪ್ರಮುಖರಾದ ಜ್ಯೋತಿ ದೇಸಾಯಿ ಗೌಡರ, ದೀಪ ಉಘಲಾಟ, ದೀಪಾ ಬೆಳವಡಿ, ಸುಜಾತಾ ಅಂಬಕ್ಕಿ, ಆಶಾ ಕಂಠಿ ಹಾಗೂ ಲಕ್ಷ್ಮಿ ಕಮಿತ್ಕರ್, ಕಾರ್ಗಿಲ್ ಯುದ್ಧದ ವೀರರ ತ್ಯಾಗವನ್ನು ಸ್ಮರಿಸಿ, ದೇಶಭಕ್ತಿ, ಶಿಸ್ತು ಮತ್ತು ರಾಷ್ಟ್ರಸೇವೆಯ ಮನೋಭಾವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಅಂಜನಾದ್ರಿ ಫೌಂಡೇಶನ್ ಅಧ್ಯಕ್ಷ ಜಗದೀಶ್ ಪೂಜಾರ, ಸುಭಾಷ್ ಚಂದ್ರ ಪೇಂಟ್, ವಜ್ರ ಪೇಂಟ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ. ಆರ್. ಬಂಡ ಮಾತನಾಡಿ, ಇಂತಹ ರಾಷ್ಟ್ರಭಕ್ತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಕರ್ತವ್ಯಪ್ರಜ್ಞೆ ಹಾಗೂ ಶಿಸ್ತಿನ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು
.ಶಾಲೆಯ ಶಿಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು, ಮಾಜಿ ಸೈನಿಕರಿಗೆ ಗೌರವ ನಮನ ಸಲ್ಲಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ವಿಶೇಷ ಹೇಳಿಕೆ”ಕಾರ್ಗಿಲ್ ವಿಜಯವು ಕೇವಲ ಸೇನೆಯ ಗೆಲುವಲ್ಲ; ಅದು ಭಾರತದ ಸ್ವಾಭಿಮಾನ ಮತ್ತು ಶೌರ್ಯದ ಪ್ರತೀಕವಾಗಿದೆ.
ಮೈನಸ್ ಡಿಗ್ರಿ ಚಳಿಯಲ್ಲೂ ಪ್ರಾಣದ ಹಂಗು ತೊರೆದು ಹೋರಾಡಿದ ಸೈನಿಕರ ತ್ಯಾಗವನ್ನು ಯುವ ಪೀಳಿಗೆ ಸದಾ ಸ್ಮರಿಸಿ, ದೇಶಸೇವೆಯ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.”– ಎಸ್. ಆರ್. ಪಾಟೀಲ್ಉಪಾಧ್ಯಕ್ಷರು, ಗದಗ ಜಿಲ್ಲಾ ಮಾಜಿ ಸೈನಿಕರ ಸಂಘ.
ವರದಿ: ಕೃಷ್ಣಾ ಎಚ್. ಹಡಪದ ಮೊ.: 9845650612
